|ಚಾಬಿ ಬಿಸ್ವಾಸ್ ಚಾಬಿ ಬಿಸ್ವಾಸ್ (ಬಂಗಾಳಿ:ছবি বিশ্বাসಚೋಬಿ ಬಿಶ್ಶಾಶ್ ) (೧೨ ಜುಲೈ ೧೯೦೦ - ೧೧ ಜೂನ್ ೧೯೬೨) ಹೆಚ್ಚು ಜನಪ್ರಿಯ ಬೆಂಗಾಲಿ ಪಾತ್ರನಟ, ಮೂಲತಃ ಇವರು ತಪನ್ ಸಿನ್ಹಾರ ಕಾಬುಲಿವಾಲ ಹಾಗು ಸತ್ಯಜಿತ್ ರೇ ಅವರ ಚಿತ್ರಗಳಾದ ಜಲಶಾಘರ್ (ದಿ ಮ್ಯೂಸಿಕ್ ರೂಂ, ೧೯೫೮) ದೇವಿ (ದಿ ಗಾಡೆಸ್, ೧೯೬೦) ಹಾಗು ಕಾಂಚೆನ್ಜುಂಗ (೧೯೬೨) ಚಿತ್ರಗಳಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ.(ಚಾಬಿ ಅಂದರೆ ಮುದ್ದು ಮುಖದ) ಇವರು ಉನ್ನತ ಶ್ರೀಮಂತ ವರ್ಗದ ಹಿರಿಯ ವ್ಯಕ್ತಿಯಾಗಿ ಅಭಿನಯಿಸಿದ ಹಲವಾರು ಪಾತ್ರಗಳಿಂದ ಸ್ಮರಣೀಯರಾಗಿದ್ದಾರೆ. ಇವರು ಸ್ವತಃ ಉತ್ತರ ಕೋಲ್ಕತ್ತಾದ ಶ್ರೀಮಂತ ಹಾಗು ಸುಸಂಸ್ಕೃತ ಮನೆತನಕ್ಕೆ ಸೇರಿದವರು. ಇವರು ೧೨ ಜುಲೈ ೧೯೦೦ರಲ್ಲಿ ಜನಿಸಿದರು. ಇವರ ತಂದೆ ಭೂಪತಿನಾಥ್ ಬಿಸ್ವಾಸ್ ತಮ್ಮ ಧರ್ಮಕಾರ್ಯಗಳಿಂದ ಪ್ರಸಿದ್ಧರಾಗಿದ್ದರು. ಇವರಿಗೆ ಸಚೀಂದ್ರನಾಥ್ ಎಂದು ನಾಮಕಾರಣ ಮಾಡಲಾಗಿತ್ತು, ಆದರೆ ಇವರ ತಾಯಿ ತಮ್ಮ ಸುರುದ್ರೂಪಿ ಮಗನಿಗೆ ಚಾಬಿ(ಒಂದು ಸುಂದರ ಚಿತ್ರ!) ಎಂಬ ಉಪನಾಮದಿಂದ ಕರೆದರು. ಹಾಗು ಈ ಹೆಸರು ಅವರ ಜೀವನ ಹಾಗು ವೃತ್ತಿಜೀವನದುದ್ದಕ್ಕೂ ಹಾಗೆ ಉಳಿದುಕೊಂಡಿತು. ತಂದೆಯ ಪಾತ್ರದಲ್ಲಿ ಅವರ ಅಸಾಧಾರಣ ಅಭಿವ್ಯಕ್ತಿಯು, ಅದಕ್ಕೆ ತಕ್ಕಂತೆ ಹೇಳಿ ಮಾಡಿಸಿದಂತೆ ಅನಿಸಿದರೂ, ಜನಪ್ರಿಯತೆ ಹಾಗು ವಿಮರ್ಶಾತ್ಮಕ ಪ್ರಶಂಸೆಯನ್ನು ಗಳಿಸುವಲ್ಲಿನ ಪಾತ್ರ ನಿರೂಪಣೆಯು ಪ್ರಭಾವಶಾಲಿಯಾಗಿರುವುದರ ಜೊತೆಗೆ ಮನಕ್ಕೊಪ್ಪುವಂತಿರುತ್ತಿತ್ತು. ಪಾತ್ರದ ನಿರೂಪಣೆಯು ಬ್ರಿಟಿಶ್ ರಾಜ್ ನ ಮಾದರಿಯಲ್ಲಿ ಸಾಂಸ್ಕೃತಿಕವಾಗಿಯೂ ಬಹಳ ಮಹತ್ವವುಳ್ಳದ್ದಾಗಿರುತ್ತಿತ್ತು. ಪೂರ್ವಾಗ್ರಹದಿಂದ ವಿಮುಕ್ತರಾದ ಬೆಂಗಾಲಿಗಳು ಪುರಾತನ ಸಂಪ್ರದಾಯ ಹಾಗು ಆಂಗ್ಲೀಕರಿಸಿದ ನಾಗರಿಕ ಸುಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು. == ಜೀವನ ಹಾಗು ಚಿತ್ರಬದುಕು == ಹಿಂದೂ ಸ್ಕೂಲ್ ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ಚಾಬಿ ಬಿಸ್ವಾಸ್ ಪ್ರೆಸಿಡೆನ್ಸಿ ಕಾಲೇಜು ಹಾಗು ನಂತರದಲ್ಲಿ ವಿದ್ಯಾಸಾಗರ್ ಕಾಲೇಜಿಗೆ ದಾಖಲಾದರು. ಈ ಅವಧಿಯಲ್ಲಿ ಅವರು ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು, ಹಾಗು ಬೆಂಗಾಲಿ ರಂಗಭೂಮಿಯ ಪ್ರಸಿದ್ಧ ನಟ ಸಿಸಿರ್ ಕುಮಾರ್ ಬಾಧುರಿಯ ಸಂಪರ್ಕಕ್ಕೆ ಬಂದರು. ಯುವ ನಟ, ಸಿಸಿರ್ ಕುಮಾರರ ಅಭಿನಯ ಚತುರತೆಗೆ ಮರುಳಾದರು, ಹಾಗು ಹಲವಾರು ಹವ್ಯಾಸಿ ರಂಗಭೂಮಿ ಸಂಘಟನಾ ಕೂಟದಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡರು. ನಾದೆರ್ ನಿಮೈ ನಾಟಕದಲ್ಲಿನ ಶ್ರೀ ಗೌರಂಗ ಪಾತ್ರವು, ಅಂದಿನ ರಂಗಭೂಮಿ ಆಸಕ್ತರಲ್ಲಿ ಚಾಬಿ ಬಿಸ್ವಾಸ್ ರ ಜನಪ್ರಿಯತೆಯನ್ನು ಗಟ್ಟಿಗೊಳಿಸಿತು. ನಂತರ ಅವರು ನಟನೆಯಿಂದ ತಾತ್ಕಾಲಿಕವಾಗಿ ವಿರಾಮ ಪಡೆದು, ವಿಮೆ ಸಂಸ್ಥೆಗೆ ಸೇರಿಕೊಂಡರು; ಅದರ ನಂತರ ಸೆಣಬಿನ ಉತ್ಪನ್ನಗಳ ವ್ಯಾಪಾರ ಆರಂಭಿಸಿದರು. ಆದರೆ ಸ್ವಲ್ಪ ಸಮಯದಲ್ಲೇ, ರಂಗಭೂಮಿಯ ಎಡೆಗಿನ ತುಡಿತವನ್ನು ತಡೆಯಲು ಸಾಧ್ಯವಾಗದೇ, ಚಾಬಿ ಬಿಸ್ವಾಸ್ ರಂಗಭೂಮಿ ಕ್ಷೇತ್ರಕ್ಕೆ ಮತ್ತೆ ಕಾಲಿಡುತ್ತಾರೆ, ಹಾಗು ಸಮಾಜ್ ಎಂಬ ಸಾಮಾಜಿಕ ಸಂಗೀತ ನಾಟಕದ ಮೂಲಕ ವೃತ್ತಿಪರ ನಟರಾಗಿ ತಮ್ಮ ಪ್ರಥಮ ಪ್ರದರ್ಶನ ನೀಡುತ್ತಾರೆ. ಚಿತ್ರನಟನಾಗಿ ಯಶಸ್ಸು ಗಳಿಸಿದ ನಂತರವೂ ಚಾಬಿ ಬಿಸ್ವಾಸ್ ವೃತ್ತಿಪರ ರಂಗಭೂಮಿ ಹಾಗು ಜಾತ್ರಾ ನಾಟಕ, ವೃತ್ತಿ ರಂಗಭೂಮಿಯ ತಂಡದೊಂದಿಗೆ ತಮ್ಮ ನಂಟನ್ನು ಹಾಗೆ ಉಳಿಸಿಕೊಂಡು ಬಂದರು. ಶೋರೋಷಿ (೧೯೪೦), ಸೀತಾ (೧೯೪೦), ಕೇದಾರ್ ರಾಯ್ (೧೯೪೧), ಷಹಜಹಾನ್ (೧೯೪೧)ನಂತಹ ಯಶಸ್ವೀ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿನ ಅವರ ನಟನೆಯು, ಪ್ರೇಕ್ಷಕರು ಹಾಗು ಅವರ ಸಮಕಾಲೀನರಲ್ಲೂ ಮೆಚ್ಚುಗೆಗೆ ಪಾತ್ರವಾಯಿತು. ೧೯೩೬ರಲ್ಲಿ, ಚಾಬಿ ಬಿಸ್ವಾಸ್ ಅನ್ನಪೂರ್ಣಾರ್ ಮಂದಿರ್ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ತಿನ್ಕರಿ ಚಕ್ರಬೋರ್ತಿ ನಿರ್ದೇಶನದ ಈ ಚಿತ್ರದಲ್ಲಿ ಚಾಬಿಬಾಬು ನಾಯಕಿಯ ಪತಿ, ಬಿಶುವಿನ ಪಾತ್ರ ನಿರ್ವಹಿಸಿದ್ದರು. ಸಮಕಾಲೀನ ಬೆಂಗಾಲಿ ರಂಗಭೂಮಿಯ ಭಾವಾವೇಶ ನಟನಾ ಶೈಲಿಯಲ್ಲಿ ತರಬೇತಿ ಪಡೆದಿದ್ದ ಚಾಬಿ ಬಿಸ್ವಾಸ್, ಸಿನಿಮಾದಲ್ಲಿ ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಬಹಳ ಬೇಗನೆ ಗ್ರಹಿಸಿಕೊಂಡರು. ನ್ಯೂ ಥಿಯೇಟರ್ಸ್ ನಿರ್ಮಾಣದ ಎಲ್ಲ ಚಿತ್ರಗಳಲ್ಲೂ ಇವರು ಕಾಣಿಸಿಕೊಂಡರು. ಜೊತೆಗೆ ಚೋಕರ್ ಬಾಲಿ (೧೯೩೭), ನಿಮೈ ಸನ್ಯಾಸ್ (೧೯೪೦) ಹಾಗು ಪ್ರತಿಸೃತಿ (೧೯೪೧)ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಬಕಿ ಬೋಸ್ ರ ಚಿತ್ರ ನರ್ತಕಿ ಯಲ್ಲಿ (೧೯೪೦) ೯೦ ವರ್ಷ ವಯಸ್ಸಿನ ವೃದ್ಧ ಸಂನ್ಯಾಸಿಯಾಗಿ ಅವರ ನಟನೆಯು ಬಹಳ ಅದ್ಭುತವಾಗಿತ್ತು. ವ್ಯತಿರಿಕ್ತವಾಗಿ, ನರ್ತಕಿ ಯಲ್ಲಿನ ಇವರ ಯಶಸ್ವೀ ನಟನೆಯು, ಪ್ರಮುಖ ಪಾತ್ರ ನಿರ್ವಹಣೆಗೆ ಅವಕಾಶಗಳನ್ನು ಸೀಮಿತಗೊಳಿಸಿತು. ಆದರೆ ಶ್ರೇಷ್ಠ ಪಾತ್ರಧಾರಿನಟನಾಗಿ ಇವರ ಖ್ಯಾತಿಯು ಆ ಹೊತ್ತಿಗೆ ಖಾಯಂಗೊಂಡಿತು. ನಟನಾಗಿ ಚಾಬಿಬಾಬುರ ಎರಡನೇ ಬಾರಿಗಿನ ವೃತ್ತಿಪರತೆಯೂ ಈ ಚಿತ್ರದೊಂದಿಗೆ ಆರಂಭಗೊಂಡಿತು. ಆದರೆ ಮನೆಯ ಒಡೆಯನಾಗಿ ಅಥವಾ ವಿನಮ್ರ ವರ್ತನೆಯ ಕುಲೀನನ ಪಾತ್ರಕ್ಕೆ ಇವರು ಬಹುತೇಕ ಅನಿವಾರ್ಯ ಆಯ್ಕೆಯಾದರು. ತಮ್ಮ ಶುದ್ಧವಾದ ಇಂಗ್ಲಿಷ್ ಉಚ್ಚಾರಣೆಯನ್ನು ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಬಳಸುವುದರೊಂದಿಗೆ,(ಪಹಾಡಿ ಸಾನ್ಯಾಲ್ ಹಾಗು ಬಿಕಾಶ್ ರಾಯ್ ಸಹ ಒಂದು ಹಂತದವರೆಗೆ ಈ ರೀತಿ ಮಾತನಾಡುತ್ತಿದ್ದರು.) ಚಾಬಿ ಬಿಸ್ವಾಸ ನಾಟಕದ ಸಂಭಾಷಣೆ ಬಿತ್ತರಿಸಲು ಒಂದು ವಿಶಿಷ್ಟ ಮಾದರಿಯನ್ನು ಬೆಳೆಸಿಕೊಂಡರು. ಮೊದಲು ಇಂಗ್ಲಿಷ್ ನಲ್ಲಿ ಮಾತನಾಡಿ, ನಂತರ ಒಂದು ತಾತ್ಕಾಲಿಕ ತಡೆಯ ನಂತರ ಅದೇ ಸಂಭಾಷಣೆಯನ್ನು ಬೆಂಗಾಲಿಯಲ್ಲಿ ಮತ್ತೆ ಪುನುರುಚ್ಚರಿಸುತ್ತಿದ್ದರು. ಅಶೋಕ್ (೧೯೪೨), ಪರಿಣಿತ (೧೯೪೨), ದ್ವಂದ (೧೯೪೩), ಮಾತಿರ್ ಘರ್ (೧೯೪೪), ದುಯಿ ಪುರುಷ್ (೧೯೪೫), ಬಿರಾಜ್ ಬೌ (೧೯೪೬), ಹಾಗು ಮಂದನ (೧೯೫೦)ದಂತಹ ಚಿತ್ರಗಳಲ್ಲಿ ಉತ್ತಮ ನಟನಾಗಿ ಅವರ ಪ್ರತಿಭೆಯು ಜನರ ಗಮನ ಸೆಳೆಯಿತು. ಚಾಬಿ ಬಿಸ್ವಾಸ್ ೧೧ ಜೂನ್ ೧೯೬೨ರಲ್ಲಿ ಕಾರು ಅಪಘಾತವೊಂದರಲ್ಲಿ ನಿಧನರಾದರು. ೧೯೬೨ರಲ್ಲಿ ಬಿಸ್ವಾಸ್ ರ ನಿಧನದ ನಂತರ, ರೇ, ವೃತ್ತಿಪರ ಪ್ರತಿಭೆಯ ಉತ್ತಮ ಮಟ್ಟ ಅಗತ್ಯವಿದ್ದ ಒಂದೇ ಒಂದು ಮಧ್ಯ ವಯಸ್ಕ ಪುರುಷನ ಪಾತ್ರವನ್ನೂ ರಚಿಸಲಿಲ್ಲವೆಂದು ಒಪ್ಪಿಕೊಳ್ಳುತ್ತಾರೆ. == ಚಲನಚಿತ್ರಗಳ ಪಟ್ಟಿ == == ಪ್ರಶಸ್ತಿಗಳು ಮತ್ತು ಗೌರವಗಳು == ೧೯೬೦ರಲ್ಲಿ ಸಂಗೀತ್ ನಾಟಕ್ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತ == ಬಾಹ್ಯ ಕೊಂಡಿಗಳು == ಚಾಬಿ ಬಿಸ್ವಾಸ್ ಐ ಎಮ್ ಡಿ ಬಿನಲ್ಲಿ .comನಲ್ಲಿ ಜೀವನಚರಿತ್ರೆ ಹಾಗು ಚಲನಚಿತ್ರಗಳ ಪಟ್ಟಿ 2007-12-12 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==